About

Home »  About

ಗಣಿತ ಮತ್ತು ವಿಜ್ಞಾನ ಶಿಕ್ಷಕರ ವೇದಿಕೆ (MSTF)
ವಾರ್ಷಿಕ ಸಭೆ ವರದಿ

ಸ್ಥಳ: CTE ಮಂಗಳೂರು ದಿನಾಂಕ: 25.07.15


ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಗಣಿತದ ಬಗ್ಗೆ ತಾರ್ಕಿಕ ಚಿಂತನೆಯನ್ನು ಸಡೆಸಲು ಪ್ರತೀಯೊಬ್ಬ ಗಣಿತ ಮತ್ತು ವಿಜ್ಞಾನ ಶಿಕ್ಷಕರು ಕ್ರಿಯಾಶೀಲರೂ, ಜ್ಞಾನ ಸಂಪನ್ನರೂ ಮತ್ತು ತಾಂತ್ರಿಕ ನೈಪುಣ್ಯತೆಯ ಸಾಧಕರೂ ಆಗಬೇಕಾದ್ದು ಇಂದಿನ ಅಗತ್ಯತೆಯಲ್ಲಿ ಒಂದು. ಈ ಉದ್ದೇಶದಿಂದಲೇ ಹುಟ್ಟಿಕೊಂಡ ವೇದಿಕೆ ನಮ್ಮ ಈ ’ಗಣಿತ ಮತ್ತು ವಿಜ್ಞಾನ ಶಿಕ್ಷಕರ ವೇದಿಕೆ (MSTF).
ದಕ್ಷಿಣಕನ್ನಡ ಜಿಲ್ಲಾ ’ಗಣಿತ ಮತ್ತು ವಿಜ್ಞಾನ ಶಿಕ್ಷಕರ ವೇದಿಕೆ (MSTF) ಯ ವಾರ್ಷಿಕ ಸಭೆ ದಿನಾಂಕ 25.07.15 ಶನಿವಾರ, CTE ಮಂಗಳೂರು ಇಲ್ಲಿ ,ದಕ್ಷಿಣಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ಆಯ್ದ ಗಣಿತ ಮತ್ತು ವಿಜ್ಞಾನ ವಿಷಯಗಳ ಸಂಪನ್ಮೂಲ ಶಿಕ್ಷಕರುಗಳ ಸಮ್ಮುಖದಲ್ಲಿ ನಡೆಯಿತು. ಶ್ರೀಮತಿ ಲಲಿತಾ ಕಲ್ಕೂರ್ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಗೆ, ಎಲ್ಲರನ್ನೂ ಶ್ರೀಮತಿ ವಿನಯಕುಮಾರಿ ಸ್ವಾಗತಿಸಿದರು .ಕಾರ್ಯದರ್ಶೀಗಳಾದ ಶ್ರೀ ರಘುನಾಥ ಭಟ್ಟ ಕಳದೊಂದು ವರ್ಷದಲ್ಲಿ ವೇದಿಕೆ ನಡೆಸಿದ ಕಾರ್ಯಚಟುವಟಿಕೆಗಳ ಸಮಗ್ರ ವರದಿ ಮಂಡಿಸಿದರು .
ಅತಿಥಿಗಳಾದ CTE .ನ Reader ಶ್ರೀ ಶಿವರಾಮಯ್ಯನವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ತಂತ್ರಜ್ಞಾನದ ಬಳಕೆಯ ಅಗತ್ಯತೆಯ ಕುರಿತು ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ CTE ಉಪನ್ಯಾಸಕರಾದ ಶ್ರೀ ಅಶೋಕ್ ಕಾಮತ್ರವರು ತರಗತಿಯಲ್ಲಿ ಎಲ್ಲ ಸ್ತರದ ವಿದ್ಯಾರ್ಥಿಗಳನ್ನು ತಲುಪಿ, ಅವರವರ ಮಟ್ಟಕ್ಕೆ ಬೋಧಿಸುವ ಅಗತ್ಯತೆಯಿದೆ; ಇಂತಹ ವೇದಿಕೆಗಳು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು. ನಂತರ ಗಣಿತ ವಿಷಯ ಪರಿವೀಕ್ಷಕರಾದ ಶ್ರೀ ರಾಧಾಕೃಷ್ಣ ಭಟ್ಟರವರ ಮಾರ್ಗದರ್ಶನದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ (MSFT) 2015-16, ಹಾಗೂ ತಾಲೂಕು ಸಮನ್ವಯಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು..

 

ಜಿಲ್ಲಾ ಕಾರ್ಯಕಾರಿ ಸಮಿತಿ:
ಅಧ್ಯಕ್ಷರು : ಶ್ರೀ ಸದಾಶಿವ ಪೂಜಾರಿ SDM ಪ್ರೌ.ಶಾ ಉಜಿರೆ.
ಉಪಾಧ್ಯಕ್ಷರು : ಶ್ರೀಮತಿ ಲಲಿತಾ ಕಲ್ಕುರ GPU ಕಾರ್ಸ್ಟ್ರೀಟ್ ಮಂಗಳೂರು.
ಕಾರ್ಯದರ್ಶಿ : ಶ್ರೀ ಪರಮೇಶ್ವರ ಹೆಗಡೆ, GHS ಕಾಡುಮಠ, ಬಂಟ್ವಾಳ.
ಖಜಾಂಚಿ : ಶ್ರೀ ಅರುಣ್ ಕುಮಾರ್ ಶೆಟ್ಟಿ AKU, ಪ್ರೌ.ಶಾ. ಕಿನ್ನಿಕಂಬಳ.

 

ತಾಂತ್ರಿಕ ಸಲಹೆಗಾರರು :

ಶ್ರೀ ಜಾನ್ಸನ್, ನಾರವಿ ಪ್ರೌ.ಶಾಲೆ. ಬೆಳ್ತಂಗಡಿ.
ಶ್ರಿ ತಾರಾನಾಥ GPU,ಕಾಲೇಜ್ ಬೆಳ್ತಂಗಡಿ .

 

ಗೌರವ ಸಲಹೆಗಾರರು : ಶ್ರೀ ವಾಲ್ಟರ್ ಡಿ’ಮೆಲ್ಲೋ, DDPI. ಮಂಗಳೂರು
: ಡಾ.ಕೆ.ವಿ ರಾವ್,ನಿರ್ದೇಶಕರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ
: ಶ್ರೀ ರಾಧಾಕೃಷ್ಣ ಭಟ್ ,ಗಣಿತ ವಿಷಯ ಪರಿವೀಕ್ಷಕರು DDPI, ಮಂಗಳೂರು.
: ಶ್ರೀ ಪುರುಷೋತ್ತಮ ವಿಜ್ಞಾನ ವಿಷಯ ಪರಿವೀಕ್ಷಕರು ,DDPI, ಮಂಗಳೂರು.
: ಶ್ರೀ ಅಶೋಕ ಕಾಮತ್, ಉಪನ್ಯಾಸಕರು CTE, ಮಂಗಳೂರು
: ಶ್ರೀ ಸಂಜುಂಡಸ್ವಾಮಿ, ಉಪನ್ಯಾಸಕರು DIET, ಮಂಗಳೂರು
: ಡಾ. ಮಂಜುನಾಥ, ಪ್ರಾಂಶುಪಾಲರು ಯೆನೆಪೋಯ ಪ.ಪೂ.ಕಾ. ಮಂಗಳೂರು.


ಖಾಯಂ ಸದಸ್ಯರು : ಶ್ರೀ ಸುಧಾಕರ ರಾವ್ ಪೇಜಾವರ, ವಿದ್ಯಾಬೋಧಿನಿ ಪ್ರೌ.ಶಾ. ಸುರತ್ಕಲ್.
: ಶ್ರೀಮತಿ ವಿನಯಕುಮಾರಿ ಭಾರತ್ ಪ್ರೌ.ಶಾ ಉಳ್ಳಾಲ.
: ಶ್ರೀ ಸ್ಟಾನಿ ತಾವ್ರೋ ಜಿಲ್ಲಾ ಸಮಿತಿ ಅಧ್ಯಕ್ಷರು ಪದುವಾ ಪ್ರೌ.ಶಾ.ನಂತೂರು.
: ಶ್ರೀ ರಘುನಾಥ ಭಟ್ಟ ಕಿಟೆಲ್ ಮೆಮೋರಿಯಲ್ ಪ್ರೌ.ಶಾ. ಗೋರಿಗುಡ್ಡ
: ಶ್ರೀ ವಾಸುದೇವ ರಾವ್ ,ಹೋಲಿ ಫ್ಯಾಮಿಲಿ ಪ್ರೌ.ಶಾ. ಬಜ್ಪೆ.

 

ತಾಲೂಕು ಸಮನ್ವಯಾಧಿಕಾರಿಗಳು :-
ಬಂಟ್ವಾಳ : ಶ್ರೀ ರಾಧಾಕೃಷ್ಣ ಬಾಳಿಗ ಸ.ಶಿ. ಶಾರದಾ ಪ್ರೌಢಶಾಲೆ ಪಾಣೆಮಂಗಳೂರು.
ಬೆಳ್ತಂಗಡಿ : ಶ್ರೀ ಶರತ್ ಕುಮಾರ್ ಸ.ಶಿ. GPUC ವೇಣೂರು.
ಮಂಗಳೂರು ಉತ್ತರ : ಶ್ರೀಮತಿ ರಮ್ಯ ಕೆ., ಸ.ಶಿ., GHS ಬಡಗು ಯಕ್ಕಾರ ಮಂಗಳೂರು.
ಮಂಗಳೂರು ದಕ್ಷಿಣ : ಶ್ರೀ ಬಾಲಕೃಷ್ಣ ನಾಯ್ಕ. ಸ.ಶಿ. GPUC ಮತ್ತೂರು.
ಮೂಡಬಿದಿರೆ : ಶ್ರೀ ಪುರುಷೋತ್ತಮ ರಾವ್. SPM ಪ್ರೌ.ಶಾ. ಬೆಳುವಾಯಿ.
ಪುತ್ತೂರು : ಶ್ರೀಮತಿ ಜಯಲಕ್ಷ್ಮಿ ಸ.ಶಿ ರಾಮಕೃಷ್ಣ ಪ್ರೌ.ಶಾ ಪುತ್ತೂರು.
ಸುಳ್ಯ : ಶ್ರೀ ಆನಂದ ವೈ.ಎ. NMPU ಕಾಲೇಜ್ ಅರಂತೋಡು, ಸುಳ್ಯ.


ಜಿಲ್ಲಾ ಕಾರ್ಯಕಾರಿ ಸಮಿತಿ 2015-16 (MSTF) ನ ಪ್ರತಮ ಸಭೆಯ ನಿರ್ಣಯಗಳು:

  • ೧) ಜಿಲ್ಲೆಯ ಕಲಿಕೆಯಲ್ಲಿ ಹಿಂದುಳಿದಿರುವ SSಐಅ ವಿಧ್ಯಾರ್ಥಿಗಳನ್ನು ಕೇಂದ್ರೀಕರಿಸಿ ವಲಯವಾರು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ೨) CCE ಗೆ ಸಂಭಂಧಿಸಿದ ಪಾಠಗಳನ್ನು ನಡೆಸಲು ಅನುಕೂಲವಾಗಿಸಲು ಶಿಕ್ಷಕರುಗಳಿಗೆ ವಿಶೇಷ ತರಬೇತಿಗಳನ್ನು ಆಯೋಜಿಸುವುದು.
  • ೩) MSTF ಈ ವೇದಿಕೆಯ ಸದಸ್ಯರಿಗೆ ತಂತ್ರಿಕ ತರಬೇತಿಗಳನ್ನು ಆಯೋಜಿಸುವುದು.
  • ೪) ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಾಥಮಿಕ ಶಾಲಾಹಂತದಲ್ಲಿ ವಿದ್ಯಾಥಿಗಳಿಗೆ ಮೂಲಭೂತ ಅಂಶಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ವಲಯವಾರು ಹಮ್ಮಿಕೊಳ್ಳುವುದು
  • ೫) NTSE/NMMS ತರಬೇತಿಗೆ ಅನುಕೂಲವಾಗಿಸಲು ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಶಿಕ್ಷಕರಿಗೆ ಒದಗಿಸಲು ಪ್ರಯತ್ನಿಸುವುದು.
  • ೬) MSTF ನ ವೇದಿಕೆ ನಡೆಸುವ ಕಾರ್ಯಕ್ರಮಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ/ ಅಭಿವೃದ್ಧಿ), ಅಖಿಇ ಮಂಗಳೂರು , ಆIಇಖಿ ಮಂಗಳೂರು, ಪ್ರತೀ ವಲಯದ ಗೌರವಾನ್ವಿತ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಸಹಕಾರ ಪಡೆಯುವುದು .